ಇತ್ತೀಚಿನ ಸೇರ್ಪಡೆಗಳು

ಸಾಹಿತ್ಯ ವಿಮರ್ಶೆ - ಸಿ ಎನ್ ರಾಮಚಂದ್ರನ್
ಮೂಕ ಧಾತು - ಕೆ ಎನ್ ಗಣೇಶಯ್ಯ
ಅನ್ವೇಷಣ - ಎಸ್ ಎಲ್ ಭೈರಪ್ಪ


ಹೊತ್ತಗೆಗಳು ಅಧ್ಯಯನ-ಪರಾಮರ್ಶೆಗೆ ಮಾತ್ರ. ಹೊತ್ತಗೆಯನ್ನು ಕೊಂಡು ಓದಿ, ಪ್ರೋತ್ಸಾಹಿಸಿ.

ಹೊತ್ತಗೆಗಳು

ಬರೆದವರ ಎರಡನೆಯ ಹೆಸರಿನ ಅನುಗುಣವಾಗಿ ವಿಂಗಡಿಸಲಾಗಿದೆ.




ಹೊತ್ತಗೆಯನ್ನು ಇಳಿಸಿಕೊಳ್ಳುವುದು ಹೇಗೆ ?

ಹೊತ್ತಗೆಯ ವಿವರಣೆಯ ಕೊನೆಯಲ್ಲಿ ಕಾಣುವ ಐದಕ್ಷರದ ಕೋಡನ್ನು (ಉದಾ: Wdc3lf) 'http://bit.ly/'ನ ನಂತರ ಸೇರಿಸಿದರೆ ಹೊತ್ತಗೆಯ ಕೊಂಡಿ ಸಿಗುತ್ತದೆ. (ಉದಾ: http://bit.ly/Wdc3lf )


ಹೊತ್ತಗೆಗಳನ್ನು ತೆರೆಯುವುದು ಹೇಗೆ ?

ಈ ಕೆಳಕಂಡ ಪರಿಚಾರಕಗಳನ್ನು ಬಳಸುವುದು.
ಕಡತದ ಮಾದರಿ / operating system ವಿಂಡೋಸ್ (windows) ಲಿನಕ್ಸ್ (linux) ಮ್ಯಾಕ್ (mac)
ಪೀಡಿಎಫ್ (pdf) ಸುಮಾತ್ರ ವೀಕ್ಷಕ (sumatra pdf viewer) ಎವಿನ್ಸ್ (evince) ಅಡೋಬ್ ರೀಡರ್ (adobe reader)
ದೇಜಾವು (djvu) ಸುಮಾತ್ರ ವೀಕ್ಷಕ (sumatra pdf viewer), ವಿಂಡೀಜೇವೀವ್ (windjview) ಎವಿನ್ಸ್ (evince) ಮ್ಯಾಕ್ಡೀಜೆವೀವ್ (macdjview)
ಈಪಬ್ (epub) ಸುಮಾತ್ರ ವೀಕ್ಷಕ (sumatra pdf viewer), ಎಫ್ಬಿ ರೀಡರ್ (fbreader) ಎಫ್ಬಿ ರೀಡರ್ (fbreader) ಎಫ್ಬಿ ರೀಡರ್ (fbreader)

ತಾಣದ ಬಗ್ಗೆ

  • ಕನ್ನಡ ಹೊತ್ತಗೆಗಳು ಎಲ್ಲರ ಕೈಗೆಟುಕುವಂತಾಗಲಿ ಅನ್ನುವುದು ತಾಣದ ಉದ್ದೇಶ. ಆಡಂಬರವಿಲ್ಲದ, ಚೊಕ್ಕಾವಾದ, ಜಾಹೀರಾತುರಹಿತ, ಲಾಭರಹಿತ ತಾಣ/ಸಮುದಾಯವನ್ನು ಕಟ್ಟುವುದು ನಮ್ಮ ಆಶಯ.
  • ಹೊತ್ತಗೆ ಅಥವ ಹೊತ್ತಗೆಯ ಭಾಗಗಳು ಕೃತಿಸ್ವಾಮ್ಯಕ್ಕೆ (ಕಾಪಿರೈಟ್) ಒಳಪಡುತ್ತವೆ, ಆದ್ದರಿಂದ ಹೊತ್ತಗೆಗಳು ಕನ್ನಡನುಡಿಯ ಸದಸ್ಯರಿಗೆ 'ಅಧ್ಯಯನ - ಪರಾಮರ್ಶೆ'ಗೆ (reference) ಮಾತ್ರ ಸೀಮಿತ. ಇಷ್ಟವಾದ ಪುಸ್ತಕಗಳನ್ನು ಕೊಂಡು ಓದಿ, ಪ್ರೋತ್ಸಾಹಿಸಿ. ದಯವಿಟ್ಟು, ಈ ಹೊತ್ತಗೆಗಳನ್ನು ಹಂಚಬೇಡಿ. ಕೃತಿಸ್ವಾಮ್ಯಕ್ಕೆ (ಕಾಪಿರೈಟ್)ಗೆ ಸಂಬಂಧಪಟ್ಟ ನಿಂದನೆಯ ಅರೋಪಗಳು(copyright abuse) ಬಂದರೆ ತಾಣವನ್ನು ನಡೆಸುವುದು ಕಷ್ಟವಾಗುತ್ತದೆ.
  • ಸಾಹಿತ್ಯಾಸಕ್ತರಿಗೆ ನಮ್ಮ ಬಾಗಿಲಿಗಳು ತೆರೆದೇ ಇರುತ್ತವೆ. ಆಸಕ್ತರಿಗೆ ಈ ತಾಣದ ಬಗ್ಗೆ ತಿಳಿಸಿ, ಯಾರು ಬೇಕಾದರೂ ಸದಸ್ಯರಾಗಬಹುದು.
  • ನಿಮ್ಮ ಸಹಾಯ: ಕನ್ನಡನುಡಿಗೆ ದುಡ್ಡಿನ ಅವಶ್ಯಕತೆ ಇಲ್ಲ. ನಿಮ್ಮ ಹತ್ರ ಸಮಯವಿದ್ದು (ವಾರಕ್ಕೊಂದು ಘಂಟೆ?), ನಿಮ್ಮ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಮನಸ್ಸಿದ್ದರೆ ತಿಳಿಸಿ, ಎಲ್ಲರಿಗೂ ಪುಸ್ತಕ ಸಿಕ್ಕಂತಾಗುತ್ತದೆ. ತಾಣವನ್ನು ನನ್ನೊಬ್ಬನಿಂದಲೇ ನಡೆಸಿಕೊಂಡು ಹೋಗುವುದು ಕಷ್ಟಸಾಧ್ಯ. ಕನ್ನಡನುಡಿಯನ್ನು ಸಮುದಾಯವಾಗಿ ಮುನ್ನಡೆಸೋಣ.

ಸ್ಕ್ಯಾನ್ ಮಾಡುವುದು ಹೇಗೆ

ಸ್ಕ್ಯಾನ್ ಮಾಡೋಕೆ ತುಂಬ ತಾಳ್ಮೆ ಬೇಕು, ಸ್ವಲ್ಪ ಪ್ರೀತೀನೂ ಬೇಕು. ಕೆಲವು ತಾಂತ್ರಿಕ ವಿಷಯಗಳ್ನ ತಿಳ್ಕೋಬೇಕಾಗ್ತದೆ, ನಿಮ್ಮದೇ ಆದ ಪ್ರಯೋಗಗಳ್ನ ಮಾಡಬೇಕಾಗ್ತದೆ. ಸ್ಕ್ಯಾನ್ ಮಾಡಿ ಪುಸ್ತಕ ತಯಾರಿಸುವ ಬಗ್ಗೆ ಹೆಚ್ಚು ತಿಳಕೊಳ್ಳಬೇಕೆನಿಸಿದರೆ ಇದನ್ನು ನೋಡಿ. ನಾನು ಅನುಸರಿಸುವ ವಿಧಾನ ಇಲ್ಲಿದೆ (ಇದಮಿತ್ಥಂ ಅಂತ ಏನಿಲ್ಲ). ಸ್ಕ್ಯಾನರ್ ಖರ್ಚು ಬಿಟ್ಟರೆ ಯಾವುದೇ ಸಾಫ್ಟ್ವೇರ್ ಖರ್ಚಿಲ್ಲ.
ಹಂತ ೧: ಸ್ಕ್ಯಾನ್ ಮಾಡುವುದು ಯಾವಾಗಲೂ '300'ಡಿಪಿಐ 'grayscale'ನಲ್ಲಿ ಸ್ಕ್ಯಾನ್ ಮಾಡುವುದು. ಲಿನಕ್ಸಿನಲ್ಲಿ gscan2pdf ಉಪಯೋಗಿಸಬಹುದು, ವಿಂಡೋಸಿನಲ್ಲಿ irfanview ಬಳಸುವುದು ಸೂಕ್ತ ಅನ್ಸತ್ತೆ . ಸಾಮಾನ್ಯವಾಗಿ ಪರಿಚಾರಕಗಳು 'one click scan per page'ಗೆ ಅವಕಾಶ ಕೊಡ್ತವೆ. ಒಂದರ ನಂತರ ಒಂದು ಹಿಂಗೆ ಸುಮಾರು ಪುಟಗಳ್ನ ಒಮ್ಮೆಲೆ ಸ್ಕ್ಯಾನ್ ಮಾಡಬಹುದು. ಸಾಮಾನ್ಯ ಗಾತ್ರದ ಪುಸ್ತಕವಾದ್ರೆ, ಒಮ್ಮ್ಲೆಲೆ ಎರಡು ಪುಟಗಳ್ನ ಸ್ಕ್ಯಾನ್ ಮಾಡಬಹುದು. ಸ್ಕ್ಯಾನ್ ಅಗುವಾಗ ಪುಸ್ತಕದ ಮಧ್ಯಭಾಗ ಸ್ಕ್ಯಾನ್ ಯಂತ್ರ ಮೇಲ್ಪದರದಿಂದ ದೂರವಿರಬಾರದು, ಆದ್ದರಿಂದ ಪುಸ್ತಕವನ್ನು ಒತ್ತಿ ಹಿಡಿಯಬೇಕಾದೀತು.
ಹಂತ ೨: ಉಳಿಸುವುದು ಸ್ಕ್ಯಾನ್ ಮಾಡಿದ ಎಲ್ಲ ಪುಟಗಳನ್ನು tif ಅಥವ tiff ಮಾದರಿಯಲ್ಲಿ ಉಳಿಸಿ (jpeg/png ಆಗಿ ಅಲ್ಲ). (compression format ಕೇಳಿದ್ರೆ LZW ಬಳಸಬಹುದು).
ಹಂತ ೩: ಓರಣಗೊಳಿಸುವುದು ಇದಕ್ಕೆ scantailor ಬಳಸಿ. ಒಪ್ಪ ಓರಣಗೊಂಡ ಚಿತ್ರಗಳ್ನ ಮತ್ತೆ tif/tiff ಮಾದರಿಯಲ್ಲೇ ಉಳಿಸಿ.
ಹಂತ ೪: ಪೀಡಿಎಫ್/ದೇಜಾವು ಆಗಿ ಎಲ್ಲ ಪುಟಗಳನ್ನು ಕಲೆಹಾಕುವುದು ಇಲ್ಲಿ ಬಹಳ ದಾರಿಗಳುಂಟು, ಆದರೆ ಕೊನೆಯಲ್ಲಿ ತಯಾರಾಗುವ ಕಡತ ತುಂಬ ದೊಡ್ಡದಾಗಿರದಂತೆ ಎಚ್ಚರ ವಹಿಸಬೇಕು ಅಷ್ಟೆ. djvutoy ಉಪಯೋಗಿಸಬಹುದು. gscan2pdf ಅಥವ irfanview plugins ಬಳಸ್ಕೊಂಡು pdfಗೆ ಬರೆಯಬಹುದು.

ಪ್ರತಿಕ್ರಿಯೆ / ಮಾತುಕತೆ / ಚರ್ಚೆ